(ಅ)ನ್ಯಾಯ

ಸಮಾಜದಿ ಸಮಸ್ಯೇಗಳು ತುಂಬಿ
ಮನುಜನ ಕಂಡು ಅಪಹಾಸ್ಯೆ
ಗೈಯುತಿರಲು...
ಮನುಜ ಇವುಗಳ ಕಂಡೂ
ಕಾಣದಂತೆ ಆಲಸ್ಯ ನಟಿಸುತಿರಲು..
ದುಷ್ಟಶಕ್ತಿಗಳು ಮೆರೆಯುತಿದೆ..!!

ಶಾಂತಿಯ ಬಯಸುವ ಜನ
ಬರಹ,ಹಾಡು,ಭಾಷಣಗಳಿಗೆ
ತಮ್ಮನ್ನು ಸೀಮಿತಗೊಳಿಸಿರಲು...
ಕ್ರಾಂತಿಯ ಬಯಸುವ ಜನ
ಮೆರೆಯುತಿಹರು ನಿರಾಯಾಸವಾಗಿ
ಈ ಸಮಾಜದಿ..!!

ಮರೀಚಿಕೆ ಇಲ್ಲಿ ನ್ಯಾಯಗಳಿಗೆ
ಕಳೆಯುತಿಹರು ಕಣ್ಣೀರಲಿ
ನೊಂದವರು...
ಕೋರ್ಟು ಕಛೇರಿಯನಳೆದು
ಈಗ ಅವರು ಕೇವಲ ಬಿಸಿಲ
ಬೇಗೆಗೆ ಬೆಂದವರು...

ಸತ್ತು ಬಿದ್ದಿರುವುದು ಕರುಣೆ
ಎಲ್ಲವೂ ಇಲ್ಲಿ ಸ್ವಾರ್ಥತೆ
ಸ್ನೇಹವ ನಟಿಸಿ ವಂಚಿಸುತ
ಮರೆತಿಹನು ಮನುಜ ಇಲ್ಲಿ
ಮಾನವೀಯತೆ...!!

- AsiddeeqN

20 Sep 2016, 06:18 pm
Download App from Playstore: