ಮುತ್ತು
1** ಮುತ್ತು **
ಭೂದೇವಿಯು ಧರಿಸಿರುವ
ಮಂಜಿನ ಮುತ್ತುಗಳನ್ನು
ಕದಿಯಲು ಬಂದ
ಬಾನ ಭಾಸ್ಕರನು....!!
ಕಿರಣಗಳ ಲಾಂದ್ರವ ಹಿಡಿದು....!!
ಗರಿಕೆಗಳ ಊರಲ್ಲಿ ಹರಡಿ
ಚಲ್ಲಿರುವ ಮುತ್ತಿನ ಮಣಿಗಳ
ಹೆಕ್ಕಿ ಎಣಿಸಲು ಬಂದ
ತಂಗಾಳಿಯ ಸುಕುಮಾರ
ಸುಗಂಧ ಪರಿಮಳವ ಹೊತ್ತು
ಕಡಲಾಳದ ನೀರಿನ
ಹನಿ-ಹನಿಯನ್ನು ಸೋಸಿ
ಚಿಪ್ಪಲ್ಲಿ ಮುತ್ತಾಗಿಸಿದ
ಸೋನೆಯ ಸಿರಿ ಕುವರ....!!
ಮುತ್ತಿನ ಸೆರಗಲ್ಲಿ
ಮುಚ್ಚಿ ಮುದ್ದಾಡುವಳು ತಾಯಿ...!!
ಕಂಡವರು ಕಂದನಿಗೆ
ದೃಷ್ಟಿ ಬಿಡುವರೆಂದು...!!
✍ ಚಂದು ✍
- vageesh
21 Sep 2016, 08:55 am
Download App from Playstore: