ಬದುಕು
ಮೂಡಣದಿ ಸೂರ್ಯ
ಮೂಡಿದರೇನು
ಬದುಕಿನ ಇರುಳು
ಕಳೆಯುವುದೇನು!!
ಕಣ್ಣಲಿ ನೀರು
ಬತ್ತಿದರೇನು
ಹೃದಯದ ನೋವು
ತೀರುವುದೇನು!!
ಗಿಡದಲಿ ಹೂವು
ಘಮಿಸಿದರೇನು
ಬಾಡಿದಮೇಲೆ
ಅರಳುವುದೇನು!!
ದೇಹದಿ ಮುಪ್ಪು
ಕಾಡಿದ ಮೇಲೆ
ಹರೆಯದ ಯವ್ವನ
ಮರಳುವುದೇನು!!
- ಪಿ.ಜಿ.ಜ್ಯೋತಿ
01 Oct 2016, 08:16 pm
Download App from Playstore: