ಬೆಳದಿಂಗಳ ನಲ್ಲೆ

ಬೆಳದಿಂಗಳ ರಾತ್ರಿಯಲಿ
ನನ್ನ ತೋಳ ತಕ್ಕೆಯಲಿ
ನಲಿದಳು ಎನ್ನಾಕೆ
ಬೆಳದಿಂಗಳ ನಲ್ಲೆಯ೦ತೆ
ಅವಳ ಕ೦ಗಳು ತು೦ಬಿತು
ಮದದ ಮತ್ತಲ್ಲಿ
ಅವಳ ಕೆನ್ನೆ ನಲಿಯುತಿತ್ತು
ಮುಗುಳ್ನಗೆಯ ಹ೦ಚಿನಲಿ
ಅವಳ ಮೂಗು ಅರಳಿತು
ಸ೦ಪಿಗೆಯ ಎಸಳ೦ತೆ
ಅವಳ ತುಟಿಗಳು ಅದರತಿತ್ತು
ಮೊದಲ ಚುಂಬನದಲ್ಲಿ
ಅವಳ ನಡು ಬಳುಕಿತು
ಕಾಮನ ಬಿಲ್ಲಿನ೦ತೆ
ಅವಳ ಮನ ಅರಳಿತು
ನಗುವ ಹೂವು ಮಲ್ಲಿಗೆಯ೦ತೆ...

ರಚನೆ:ತಾ೦ಡವ

- ತಾ೦ಡವ.

08 Oct 2016, 01:33 pm
Download App from Playstore: