ನ್ಯೂನತೆ
ಕರುಣ ಜನಕನಲ್ಲ ನೀ
ನಿಷ್ಕ್ ಕರುಣಿ ಯಾಗಿರುವೆ
ಈ ಜಗತ್ತಿನ ಮಾಯ ಲೋಕದಲ್ಲಿ //
ಕರುಣೆ ಎಂಬುದು ನಿನ್ನಲ್ಲಿದಿದರೆ
ಸೃಷ್ಟಿಯಲಿ ನೀ ಸೃಷ್ಟಿಸುತಿರಲಿಲ
ಈ ತಾರತಮ್ಯದ ವೈವಿಧ್ಯವ //
ಯಾವ ಪಾಪವ ಮಾಡಿಹರು
ಈ ನ್ಯೂನತೆಯ ಮುದ್ದು ಕ೦ದಮ್ಮಗಳು
ಎಳೆವಯಸ್ಸಿನ ಮುದ್ದು ಮನಗಳು//
ತ೦ದೆ ತಾಯಿಗಳು ಮಾಡಿದ ಪಾಪವೋ
ಸೃಷ್ಟಿಯ ವಿಕೃತಿಯೋ
ಮನುಕುಲದ ಶಾಪವೋ //
ನಲುಗುತಿವೇ ಒಡನಾಡಿಗಳು
ಎನನ್ನು ಅರಿಯದೇ
ಸೃಷ್ಟಿಯ ಈ ನಿಯಮದಲೀ//
- ತಾ೦ಡವ.
09 Oct 2016, 11:32 am
Download App from Playstore: