ಕಣ್ಣ ಹನಿ

ಮೂಡಿದೆ ಇಬ್ಬನಿ
ಕಣ್ಣಿನ ಅಂಚಲಿ
ಮೋಡದಿ ಸುರಿಯದ
ಮಳೆಹನಿ ಕಣ್ಣಲಿ!!

ಇಂದು ಮಾತಾಡಲು
ಜೊತೆ ಯಾರಿಲ್ಲದೆ
ಮನ ಮೂಕಾಗಿದೆ
ಒಂಟಿತನ ಕಾಡಿದೆ!!

ಕನಸು ತಾ ಕರಗುತ
ನೆನಪು ಮರುಕಳಿಸುತ
ಹರಿವ ಧಾರೆ ಇದು
ತುಂಬಿ ಈ ಕಂಗಳ!!

ತಂದೆ ನೀ ವಿರಹವ
ಬಂದು ಈ ಹೃದಯಕೆ
ನೊಂದ ಭಾಶೆ ಇದು
ಉಕ್ಕಿ ಈ ಕಣ್ಣಲಿ!!

ಮೂಡಿದೆ ಇಬ್ಬನಿ
ಕಣ್ಣಿನ ‌ಅಂಚಲಿ
ಮೋಡದಿ ಸುರಿಯದ
ಮಳೆಹನಿ ಕಣ್ಣಲಿ!!

- ಪಿ.ಜಿ.ಜ್ಯೋತಿ

10 Oct 2016, 06:02 pm
Download App from Playstore: