ಕಾದಿರುವೆ ನಾ ನಿನ್ನನ್ನೇ...
ಕಾದಿರುವೆ ನಾ ನಿನ್ನನ್ನೇ..
ಗೆಜ್ಜೆಯೇ ಇಲ್ಲದ ಕಾಲ್ಗಳಲಿ ಹೃದಯಕ್ಕೆ ಲಗ್ಗೆ ಇಟ್ಟ ಗೆಳತಿ ನಿನ್ಯಾರೆ..
ನಿನ್ನೆಜ್ಜೆಯಾ ಸದ್ದಿಗೆ ಮಲಗಿದ್ದ ಮನವು ಹಿಂದಿರುಗಿ
ನೋಡಲೊಮ್ಮೆ ಬಯಸಿದೆ ಮನಸಾರೆ..
ಬಯಸಿದ ಆಸೆಯು ಫಲಿಸಿದೆ ನಿನ್ನ ಕಾಲ್ಬೆರಳಿಗೆ
ತೊಡಿಸಿದ ಕಾಲುಂಗುರವ ಕಂಡರೆ..
ಮನಸಿಟ್ಟು.. ಮನದ ಸಿಟ್ಟನು ಬದಿಗಿಟ್ಟು..
ಮನಸಾರೆ ಮನದೊಳಗೆ ಅಡಿಯಿಟ್ಟು ಬಾ..
ಕಾದಿರುವೆ ನಾ ನಿನ್ನನ್ನೇ..
- ಅರೆಯೂರು ಚಿ. ಸುರೇಶ್
10 Oct 2016, 06:30 pm
Download App from Playstore: