ನಿನ್ನ ನಗುವೆ ಕಾರಣ

ಸುಮ್ಮನಿರು ಗೆಳತಿ ನಿನ್ನೀ ನಗುವೇ..
ಪ್ರೀತಿಯ ಬಲೆಗೆ ಬೀಳಲು..
ಪ್ರೇಮದ ಅಲೆಗೆ ಸಿಲುಕಲು..
ಮೊಗ್ಗಂತ ಮನವು ಹೂವಂತೆ ಅರಳಲು..
ಅರಳಿದ ಹೂವು ನಿನ್ನ ಮುಡಿಗೆ ಸೇರಲು..
ಆತುರದಿ ನಿನ್ನ ಕಾಣಲೆಂದು ಓಡೋಡಿ ಬರಲು..
ಕಾಣದೂರಲಿ ನಿಂತು ಕಣ್ಣ ಸನ್ಹೆಯಲಿ ಕರೆಯುವ ಮೊದಲು..
ಸುಮ್ಮನಿರು ಗೆಳತಿ ಪ್ರೀತಿಯ ಬಲೆಗೆ ಬೀಳಲು ನಿನ್ನೀ ನಗುವೇ ಕಾರಣ..

- ಅರೆಯೂರು ಚಿ. ಸುರೇಶ್

11 Oct 2016, 05:51 am
Download App from Playstore: