ನೆನಪು
** ನೆನಪು **
ಸೋನೆಯು ಸುರಿಸುವ
ಹನಿ-ಹನಿ ಮಳೆಯಿಂದ
ಇಳೆಯಲ್ಲಿ ಹಸಿರಿನಂದರ..!!
ಬಾನ ಬಯಲಲ್ಲಿ
ತೇಲುವ ಚಂದಿರನ
ಬೆಳದಿಂಗಳಂದರ....!!
ವಸಂತನ ಆಗಮನಕ್ಕೆ
ಕೋಗಿಲೆಯ ಗಾಯನದ
ಇಂಪಿನಂದರ....!!
ಸಾಗರದ. ಅಲೆಗಳ
ಏರಿಳಿತಕ್ಕೆ ಕಡಲ
ಕಲರವದಂದರ.....!!
ನನ್ನ ಹೃದಯ ಮಯೂರಕ್ಕೆ
ನಿನ್ನ ನೆನಪುಗಳ ಸುಂದರ
ನರ್ತನದಂದರ.....!!
✍ ಚಂದು ✍
- vageesh
11 Oct 2016, 09:55 am
Download App from Playstore: