ದೇವರ ನಂಬೇನ

ದೇವರ ನಂಬೇನ ನಾನು
ದೇವರ ನಂಬೇನ
ನಂಬಿದ ದೇವರು ಕೈಯ ಬಿಡುವದಿಲಲ್ಲ
ಎಂಬುದು ನಂಬೇನ

ಸಣ್ಣವಳಿದ್ದಾಗ ಕುಣಿಕುಣಿದಾಡುತ
ಶಾಲೆಗ ಹೋಗೇನ ನಾನು
ಶಾಲೆಗ ಹೋಗೇನ
ಶಾಲೆಯ ಮುಗಿಸಿ ಕಾಲೇಜಿಗ್ಹೋಗದೆ
ಮದುವೆಯ ಆಗೇನ ಮೆಚ್ಚಿ
ಮದುವೆಯ ಆಗೇನ

ಜಾತಿ ಭೇದ ತಿಳಿಯದ ನಾನು
ಗಂಡನ ನಂಬೇನ ನಾನು
ಗಂಡನ ನಂಬೇನ
ಗಂಡು ಮಗನು ಬೇಕು ಎನ್ನುತ
ಮಕ್ಕಳ ಹೆತ್ತೇನ ಐದು ಹೆಣ್ಣು
ಮಕ್ಕಳ ಹೆತ್ತೇನ

ಮಕ್ಕಳು ಬೆಳೆದು ದೊಡ್ಡವರಾದಾಗ
ಬಡತನ ಕಾಡೈತೆ ನನಗ
‌ ಬಡತನ ಕಾಡೈತೆ
‌‌‌‌‌‌‌ ಜೀವ ನೊಂದೈತೆ ನನ್ನ
ಜೀವ ನೊಂದೈತೆ
ಬೇಸರ ಆಗೈತೆ ಜೀವಕ
ಬೇಸರ ಆಗೈತೆ

ಬಡತನ ಅಳಿಸಲು ವೃತ್ತಿಯ ಹುಡುಕಿ
ಸಂಸ್ಥೆಯ ಸೇರೇನ ಶಿಕ್ಷಣ ಸಂಸ್ಥೆಯ ಸೇರೇನ
ಶಿಕ್ಷಣ ಸಂಸ್ಥೆಯಲಿ ಶಿಕ್ಷೆಯ ನೀಡಿ
ಭಿಕ್ಷೆಯ ಹಾಕತಾರ ನಮಗ ಭಿಕ್ಷೆಯ ಹಾಕತಾರ

ತಾಳಿದವನು ಬಾಳಿಯಾನು
ಅಂತ ದೇವರ ನಂಬೇನ ನಾನು
ದೇವರ ನಂಬೇನ.....!

- Lavanya .Oblesh. Madar

11 Oct 2016, 10:08 pm
Download App from Playstore: