:ಕಾಡದಿರು:
ಹೋಗದಿರು ಮನವೇ ಅವಳು ಕಾಡಿದಲ್ಲೆಲ್ಲ
ನಮಗೇಕೆ ಅವಳ ಉಸಾಬರಿ
ಧಾರೆ ಎರೆದೆವು ಸಾಕ್ಷತ್ಕರಿಸಲು ಒಲುಮೆಯ
ಹುಟ್ಟಿದಾಗಿನ ಬಾಂದತ್ವ ತೊರೆದೆವು
ದಿನದ ಜಂಜಾಟವ ಮುಡುಪಿಟ್ಟೆವು
ಅಮ್ಮನೂ ನೆನಪು ಮಾತ್ರವಾದಳು
ಚಿತ್ತದ ಪ್ರತಿ ಉಸಿರು ಅವಳೆದೆಂಬಂತೆ ಬದುಕಿತು
ಪ್ರತಿ ಹೆಜ್ಜೆಯ ನೆರಳಿನ ಕನಸು ಅವಳದೇ
ಮೌನವ ಮಾತಾಗಿಸಿ ಉನ್ಮಾದದ ಕವಿತೆಗೂ ತಿರುಗದವಳ
ನೀ ಏಕೆ ನೆನೆಯುವೆ ಸುಮ್ಮನಿರು ನನ್ನೊಟ್ಟಿಗೆ ಅವಳ ನೆನೆಯದೆ....
- ದೀಪು....
12 Oct 2016, 03:17 am
Download App from Playstore: