***ನನ್ನವಳು....***
ನನ್ನವಳು ಏನೆಂದು ಗೀಚಲಿ
ಮರೆಮಾಚದ ಅವಳ ಮುಗ್ಧ ನುಡಿಗೆ
ನೆರಳಲ್ಲೂ ತಪ್ಪು ಕಾಣದ ಅವಳ ನಡೆಗೆ
ಸರಮಾಲೆ ಹೊತ್ತ ಅವಳ ಸಂಕಷ್ಟಗಳ ಬದುಕಿಗೆ
ಎದುರಾದ ಜೀವನವ ಹೂಮಾಲೆಯಂತೆ ಹೆಣೆದ ಕಲೆಗೆ
ಒಂದಕ್ಷರದ ಅರಿವಿಲ್ಲದೆ ಬಂಧಗಳ ಜೋಡಿಸಿಟ್ಟ ಬಲೆಗೆ
ನನ್ನ ಹೊರತು ಬೇರೆ ಯೋಚಿಸದ ಅವಳ ಒಲವಿಗೆ
ಈಗೀಗ ಅವಳು ನನ್ನಿಂದ ಬಯಸುವ ಕೇವಲ ಒಂದು ಕಿರುನಗೆಗೆ
ನನ್ನ ನಾ ಅರ್ಪಿಸದ ಹೊರತು ಬೇರೇನ ನೀಡಲಿ ನನ್ನತನದ ಕೊಡುಗೆ....
- ದೀಪು....
12 Oct 2016, 10:07 pm
Download App from Playstore: