:ಗುರುವಿಲ್ಲದ ವಿದ್ಯೆ:
ಗುರುವಿಲ್ಲದ ವಿದ್ಯೆಗಳಿಗೆ ಬರವುಂಟೆ
ಅವಳ ಓರೆ ನೋಟದಲ್ಲಿ ಪಾಂಡಿತ್ಯದ ದರ್ಪವಿಲ್ಲ
ಜೀವ ಹಿಂಡೋ ಮುಗುಳ್ನಗೆಗೆ ಪಾವತಿಸಬೇಕಾದ ಶುಲ್ಕವಿಲ್ಲ
ಧಾರೆ ಎರೆಯೊ ಪ್ರೀತಿಯ ಸಾಕ್ಷಾತ್ಕಾರಕೆ ವ್ಯಾಕರಣವೇಕೆ
ಜಗ ಮರೆಯೋ ಸ್ಪರ್ಷದ ಸುಖಃಕೆ ಬೆತ್ತದ ರುಚಿಯ ಭಯವಿಲ್ಲ
ಜೊತೆ ನಡೆಯೋ ನಾಲ್ಕೆಜ್ಜೆಯ ಗುರುತಿಗೆ
ಪರೀಕ್ಷೆಗಳ ಗೊಂದಲವಿಲ್ಲ
ನೂರುಕಾಲ ಜೊತೆ ಬಾಳೋ ಗೆಲುವಿಗೆ ಪಾಸು ನಪಾಸುಗಳ ಚಿಂತೆಯಿಲ್ಲ
ಬೆತ್ತಲಾಗಿ ಆಡೋ ಕಾಮದಾಟಕೆ ಸಮವಸ್ತ್ರಗಳ ಪರಿವೆಯಿಲ್ಲ
ಅವಳಿಗೆ ನಾ ನೀಡೋ ಭದ್ರತೆಯ ಭರವಸೆ ಯಾವ ಗುರುವು ಯಾವ ಶಾಲೆ ತಾನೆ ಎನಗೆ ನೀಡಬಲ್ಲದ
- ದೀಪು....
13 Oct 2016, 07:38 pm
Download App from Playstore: