:ನಾನೊಂದು ತೇರು:
ಬರಿದಾದ ಬಿಳಿ ಕಾಗದಕೆ ಅಕ್ಷರಗಳ ಸರಮಾಲೆ ಹೊರುವ ತವಕ
ಮನವೋ ಸಾವಿರ ಕುದುರೆಗಳ ಸವಾರಿ
ಪದಗಳದು ಉಪಮಾನಗಳಡಿ ಗುದ್ದಾಟ
ನನ್ನವಳದೋ ಓರೆಗಣ್ಣ ಚುಂಬಕ ನಗೆಯ ಸೆಳೆತ
ಅಮ್ಮನೋ ಮೌನದಲ್ಲೇ ಪಿಸು ಮಾತಾಡಿಸೋ ಔದಾರ್ಯ
ಗೆಳೆತನವೋ ಜಾತಕ ಹಕ್ಕಿಯ ಕಾಯುವಿಕೆ ಕಾವ್ಯಕೆ
ಸಾಗರ ಚಂದ್ರಗಳದು ಪ್ರಕೃತಿಯೊಡಗೂಡಿ ಘೀಳಿಡೋ ಅವಸರ
ನಾನು ಈಗ ನಾನೇನು ಯಾರಿಗೂ ಬೇಡವಾದರೂ ಪದಗಳ ಮೆರವಣಿಗೆ ಹೊತ್ತು ತರೋ ತೇರು.....
- ದೀಪು....
14 Oct 2016, 12:09 am
Download App from Playstore: