ಪ್ರಿಯತಮೆ

ಕನಸುಗಳ ಹಿ೦ಡಿನಲಿ
ವಣ೯ಮಯ ಬಿ೦ಬಗಳಲಿ
ನಸುಕು ನಸುಕಿನ ಛಾಯೆಯಲ್ಲಿ
ನಿನ್ನ ರೂಪ ಕ೦ಡೆನಲ್ಲಿ //

ಹೃದಯ ವೀಣೆ ನುಡಿಸುತಲಿ
ಮಿಡಿವ ತಂತಿ ನಾದದಲಿ
ಮನದೀ ಮೌನ ರಾಗದಲಿ
ನಿನ್ನ ನೆನಪ ಹಾಡುತಲಿ//

ಚು೦ಬಿಸುವ ಹರುಷದಲಿ
ಕಡಲು ಬಾನು ಸೇರುತಲಿ
ಅಲೆ ಅಲೆಯ ನಡುವಿನಲಿ
ನೀ ತೇಲಿ ಬರುವೆ ಅಲ್ಲಿ//

ಈ ಪ್ರೀತಿಯ ಆಟದಲಿ
ಸಿರಿಯ ಸೊ೦ಪು ಹರಡುತಲಿ
ಸ್ವಪ್ನ ಸೌದ ಕಟ್ಟುತಲಿ
ಕೂಡಿ ನಲಿವ ನಿತ್ಯವಿಲ್ಲಿ...

- ತಾ೦ಡವ.

14 Oct 2016, 11:36 am
Download App from Playstore: