ಕಾವ್ಯ ಕನ್ನಿಕೆ

** ಕಾವ್ಯ ಕನ್ನಿಕೆ **

ಕಲ್ಸಕ್ಕರೆ ಬೊಂಬೆ ಕೇಳೆ
ಹಸೆಮಣೆಗೆ
ಹಾಲೋಗರ ರಂಭೆ ಬಾರೆ..!!

ದೇವರ ಹೂದೋಟದಲಿ
ಅರಳಿರುವ ಮಲ್ಲಿಗೆಯೆ...
ಮುದ್ದಾಗಿ ಮಾತನಾಡೋ
ಮಲೆನಾಡ ಅರಗಿಣಿಯೇ...!!

ಸಿರಿಸಂಪಿಗೆ ಬನದಲ್ಲಿ
ಸೊಂಪಾಗಿ ಬೆಳೆದಂತೆ..
ಹಾಲ್ಜೇನು ಮೊಸರಾಗಿ
ನೈವೇದ್ಯಕೆ ಬಂದಂತೆ...!!

ಆನಂದದ ಲಹರಿಯಾಗಿ
ಒಲವಿನೆದೆಯ ರಾಗವಾಗಿ..
ಕುಂಚದಲಿ ಅವತರಿಸಿಹ
ರಸಕಾವ್ಯ ಕನ್ನಿಕೆಯಾಗಿ...!!

- ಅರೆಯೂರು ಚಿ. ಸುರೇಶ್

14 Oct 2016, 10:02 pm
Download App from Playstore: