ಹನಿ ಗವನಗಳು
ಗೆಳೆಯ
ನನ್ನೀ
ಕಾವ್ಯ ಕನ್ನಿಕೆ
ಬೀಗುತಿಹಳು
ತಾ......
ಹೆಣ್ಣೆಂದು
ಕವಿಯ
ಕನಸಿನ
ಕೂಸು
ಹೆಣ್ಣು....
ಈ
ಭೂಮಿ
ಭಾನು
ಜಲ
ಪ್ರಕೃತಿ
ಎಲ್ಲವೂ
ಹೆಣ್ಣೇ....
ನಿನ್ನ
ಹೆತ್ತ ಆ
ತಾಯಿಯೂ
ಹೆಣ್ಣೇ.....
ಸಹನೆಯ
ರೂಪವೇ
ಹೆಣ್ಣು......
ಗೆಳೆಯ
ನೀ .....
ಗೌರವಿಸು
ಹಲವು
ರೂಪ ಹೊತ್ತ
ಹೆಣ್ಣನ್ನು
ನೀ......
ಪುಜಿಸಿದರೆ
ಅವಳಿರುವಳು
ನಿನ್ನೀ.....
ಹೃದಯ
ದೇಗುಲದಲ್ಲಿ
ಸದಾಕಾಲ
- ಅರೆಯೂರು ಚಿ. ಸುರೇಶ್
14 Oct 2016, 10:06 pm
Download App from Playstore: