ಹೇಳು ಗೆಳತಿ

ಯಾವ ಭಾವವ ಮೀಟೊ
ವೀಣೆಯಾಗಲಿ ನಾನು!!
ಯಾವ ನಾದವ ಸೇರೊ
ಸ್ವರವಾಗಲಿ ನಾನು !!
‌‌ಹೇಳು ಗೆಳತಿ ನೀ ಹೇಳು
ನನ್ನ ಬದುಕಿನ ಧಾಟಿ ಹೇಳು ನೀನು!!

ಸರಿಗಮದ ಅಂಚಿನ
ಭಾವ ಆಗಬೇಕೇನು !!
ಶೃತಿ ಲಯದ ಒಳಗಿನ
ರಾಘ ಆಗಲೇನು ‌‌ !!
ಹೇಳು ಗೆಳತಿ ನೀ ಹೇಳು
ನನ್ನ ಬದುಕಿನ ಧಾಟಿ ಹೇಳು ನೀನು!!

ತಾಳ ತಪ್ಪಿದ ಶೃತಿಯು
ನಾ ಆಗಲಾರೆನು !!
ದಾರಿ ತಪ್ಪಿದ ಜೀವ ಕೂಡ
ನಾ ಆಗಲಾರೆನು !!
ಹೇಳು ಗೆಳತಿ ನೀ ಹೇಳು
ನನ್ನ ಬದುಕಿನ ಧಾಟಿ ಹೇಳು ನೀನು!!

ಸಂಗೀತದ ಒಂದು
ಪಲ್ಲವಿಯು ನಾನು !!
ಅದರೊಳಡಗಿರುವ
ರಸ ಕಾವ್ಯವು ನಾನು !!
‌ ಈಗ ಹೇಳು ಗೆಳತಿ
ನನ್ನ ಬದುಕಿನ ಧಾಟಿಯನು ನೀನು!!

- ಪಿ.ಜಿ.ಜ್ಯೋತಿ

16 Oct 2016, 02:51 pm
Download App from Playstore: