ಬಂಧುಗಳು
ಬಂಧುಗಳು ಬೇಕು ಎನುವ
ಬಂಧನದಲಿ ಸಿಲುಕದಿರು ನೀ
ಬಂಧುಗಳ ಮಾತಿಗೆಂದೂ
ಬಂಧಿ ಆಗದಿರು !!
ಸಿರಿತನದ ಸಿರಿ ಸವಿದು
ಬಡತನಕೆ ಬಾರದವರು
ಬಂಧುಗಳು ಎನ್ನುವುದು
ನಿಜವಲ್ಲ ತಿಳಿದಿರು!!
ಸಂತಸದ ಹಾದಿಗೆ
ಬೆಳಕಾಗಿ ಬರುವರು
ದುಂಖದ ದಿನಗಳಲ್ಲಿ
ಮರೆಯಾಗಿ ನಿಲ್ಲುವರು!!
ಬಂಧುಗಳು ಹೀಗೆ
ಇದ ಎಂದೂ ಮರೆಯದಿರು
ಬಂಧುಗಳು ಬೇಕು ಎನುವ
ಬಂಧನದಲಿ ಸಿಲುಕದಿರು!!
- ಪಿ.ಜಿ.ಜ್ಯೋತಿ
17 Oct 2016, 09:54 am
Download App from Playstore: