ಬಾಲ್ಯ

ಬಾಲ್ಯವೆಂಬುದು ಅಂದು
ಚಂದದಾ ಬಿಂದು
ಅದರ ನೆನಪೇ ಇಂದು
ಸುಖದಲ್ಲಿ ಒಂದು !!

ಹಗಲಲ್ಲಿ ನಾನಂದು
ಮಾಡಿದೆ ಕಿರಿ ಕಿರಿ
ಕಿಟಕಿಯ ಆಚೆಗಿನ
ಚಂದ ಮಾಮನ ನೋಡಲು!!

ಹಗಲಲ್ಲಿ ಬೇಕೆಂದೆ
ಕತ್ತಲ ಆ ಸಂಜೆ
ಕತ್ತಲೆ ಆಗುತ್ತಾ
ಇರುಳು ಬೇಡವೆಂದೆ!!

ನಿದಿರೆಯ ಹೊತ್ತಲಿ
ಅಮ್ಮನೇ ಬೇಕೆಂದೆ
ಅಮ್ಮ ಲಾಲಿಯ ಹಾಡಲು
ಅಪ್ಪ ಹೇಳೋ ಕಥೆಯೇ ಬೇಕೆಂದೆ!!

- ಪಿ.ಜಿ.ಜ್ಯೋತಿ

17 Oct 2016, 10:09 am
Download App from Playstore: