ನೀನಿದ್ದೆ ಜೊತೆಯಲ್ಲಿ

ನೀನಿದ್ದೆ ಜೊತೆಯಲ್ಲಿ
ಬಾಲ್ಯದ ಗೆಳತಿಯಾಗಿ
ಮೊದಲನೆ ಪ್ರೀತಿಯಾಗಿ
ಜನನಿಯ ಪ್ರತಿರೂಪವಾಗಿ
ಜಗತ್ತಿನಲ್ಲೆಲ್ಲೂ ಸಿಗದ ಪ್ರೇಯಸಿಯಾಗಿ
ಬೆಳಕಿನಲಿ ಹಿಂಬಾಲಿಸುವ ನೆರಳಾಗಿ
ಕತ್ತಲೆಯನು ಕಳೆಯುವ ಬೆಳದಿಂಗಳಾಗಿ
ಸೋಲನು ಮರೆಸುವ ಗೆಲುವಾಗಿ
ದುಃಖವನು ಬದಲಿಸುವ ನಲಿವಾಗಿ
ಮನಸನು ಹಿತಗೂಳಿಸುವ ತಂಗಾಳಿಯಾಗಿ
ನೀನಿರುವೆ ಜೊತೆಯಲಿ
ನನ್ನೀ ಹೃದಯ ಬಡಿತವಾಗಿ
ಬೆಚ್ಚನೆಯ ಉಸಿರಾಗಿ
ನನ್ನೂಳು ಎಂದೆಂದಿಗೂ ಇರುವೇ ನೀ
'ಅನುಕಂಪವಾಗಿ
'ಅನು'ರಾಗವಾಗಿ
'ಅನು'ಬಂಧವಾಗಿ
ಎಂದೂ ನನಸಾಗದ ಕನಸುಗಳಾಗಿ
ಅಳಿಸಲಾಗದ ನೆನಪುಗಳಾಗಿ......

- ಹರೀ

18 Oct 2016, 12:04 am
Download App from Playstore: