ಬೋರಾದ ನನ್ನ ಜೀವನ
ಬಾಲ್ಯದ ಜೀವನ
ಈಗಿನ ಆಗು ಹೋಗು
ಮುಂದಿನ ಭವಿಷ್ಯ
ಎಲ್ಲವನ್ನೂ ಚಿಂತಿಸುವಾಗ
ತೀರ ತಲುಪದ ಹಡಗಿನಂತೆ...
ಆಸೆ ಬತ್ತಿ ಹೋಗಿದೆ..
ಕನಸು ಗೋರಿಯಾಗಿದೆ
ಮನಸ್ಸು ನಿಧಾನವಾಗಿದೆ
ಜೀವನ ಭೀಕರ ಹಿಡಿತದಲ್ಲಿದೆ
ತಾಕತ್ತು ಬೂದಿಯಾಗಿದೆ
ಮನಸ್ಸು ಅಲ್ಲೋಲ - ಕಲ್ಲೋಲವಾಗಿದೆ...
ಯಾವುದೂ ಬೇಡವೆನಿಸುತ್ತದೆ..
ಎಲ್ಲರೂ ಶತ್ತುಗಳಂತೆ ಗೋಚರವಾಗುತ್ತಾರೆ..
ಎಲ್ಲರೂ ನನ್ನನ್ನು ತೊರೆದಂತೆ ಭಾಸವಾಗುತ್ತಿದೆ..
ಕನಸು ಹುಸಿಯಾಗಿದೆ..
ಈ ಜೀವನ ಬೋರಾಗಿದೆ.
ಸಾವು ಹತ್ತಿರವಾಗುತಿದೆ.
ಸಾಯಲು ಮನಸಾಗುತಿದೆ.
ಸಾವು ಇಷ್ಟವಾಗಿದೆ..
ಜೀವನ ಬೋರಾಗಿದೆ
ಮರಣ ಗೆಲ್ಲುತಿದೆ.
ಅದು ಹತ್ತಿರವಾಗುತಿದೆ..
- ಶಾಹಿದ್ ಉಪ್ಪಿನಂಗಡಿ
18 Oct 2016, 07:53 am
Download App from Playstore: