ಅವಳು

ಕಪ್ಪು ಕಾಡಿಗೆ ಅವಳ ಕಣ್ಣಿಗೆ
ಮೆತ್ತಿ ತೀಡಿದ ಅಂದ ಕಾಡಿದೆ!!
ಒರೆ ನೋಟದ ಚಂದ್ರ ಸುಂದರಿ
ಕಾಡುತಿರುವಳು ಏಕೆ ಈ ಪರಿ!!

ಹವಳ ಕಾಂತಿಯ ಅದರ ತೊದಲುವ
ಮೆಲ್ಲ ಮಾತಿನ ದನಿಯು ಕಾಡಿದೆ!!
ಅವಳ ಉಸಿರಿನ ಗಾಳ ಸೋಕಿಲು
ನನ್ನ ತನುವಿನ ಕಾವು ಏರಿದೆ!!

ಬಳುಕಿ ನಿಂತಿದೆ ಬಳ್ಳಿ ಮೈ ಸಿರಿ
ಧುಮುಕಿ ಹರಿಯುತ ಯವ್ವನ ಜರಿ!!
ಸೊಕ್ಕಿ ನಡೆಯುವ ನಡುವ ಬಳಸಲು
ಹಿಗ್ಗಿ ಹೆಚ್ಚಿದೆ ಮನದ ತವಕವು!!

ರೂಪ ರಾಶಿಯ ದೇವ ಕನ್ನಿಕೆ
ಸೋತು ಹೋದೆನು ಅವಳ ಅಂದಕೆ!!
ಪುಳಕವಾಗಿದೆ ನನ್ನ ಈ ಮನ
ಮೆಚ್ಚಿ ಬಯಸುತ ಅವಳ ತನು ಮನ!!

- ಪಿ.ಜಿ.ಜ್ಯೋತಿ

19 Oct 2016, 11:18 am
Download App from Playstore: