ನಲ್ಲೆ
ಹೇಳದೇ ನೀನು ಹೋಗುವುದೆಲ್ಲಿ
ಕೇಳಿದ ಮೇಲೂ ಹೇಳಲು ಒಲ್ಲೆ!!
ಕಾಣದೇ ನೀನು ಹೋದರೆ ನಲ್ಲೆ
ಹುಡುಕಲು ನಾನು ಹೋಗುವುದೆಲ್ಲಿ!!
ಹೂವಿನ ಗಿಡಕೆ ಮುಳ್ಳಿನ ಬೇಲಿ
ಇಲ್ಲದೇ ಹೋದರೆ ವೈರಿಯ ದಾಳಿ!!
ಹೆಣ್ಣಿನ ಜನುಮಕೆ ಗಂಡಿನ ಆಸರೆ
ಇಲ್ಲದೇ ಹೋದರೆ ಬದುಕಲಿ ಗೇಲಿ!!
ಪ್ರೇಮದಿ ನಾನು ಕಾದಿರುವಾಗ
ಬಿಂಕದಿ ನೀನು ಸಾಗುವುದೇಕೆ!!
ಮನಸಿನ ಮಾತು ಹೇಳಿದ ಮೇಲು
ಮೌನದ ಉತ್ತರ ನೀಡುವುದೇಕೆ!!
ಕಂಡರು ಕಾಣದ ದೂರವು ಸಾಕು
ಬಂದರು ಬಾರದ ವಿರಹವು ಸಾಕು!!
ಬಳ್ಳಿಗೆ ಆಸರೆ ಮರವಾದಂತೆ
ನಿನ್ನೊಲವಿಗೆ ಆಸರೆ ನಾನಾಗಿರುವೆ!!
- ಪಿ.ಜಿ.ಜ್ಯೋತಿ
19 Oct 2016, 11:19 am
Download App from Playstore: