ನಾ ಹೋಗುತಿದ್ದ ರಸ್ತೆಯಲ್ಲಿ ನ

ನಾ ಹೋಗುತಿದ್ದ ರಸ್ತೆಯಲ್ಲಿ ನೀನೇಕೆ ಬಂದೆ.....
**********************************

ನನ್ನ ಹಿಂದೆ ಮುಂದೆ ನಾ ಬೇಡವೆಂದರೂಬಂದೆ

ಅವಸರವಸರವಾಗಿದ್ದರುನೂ ನೀ ನನ್ನ ಬಿಡದೆ ಬಂದೆ

ಬರಬೇಡೆನ್ನ ಜೊತೆಗೂಡಿ ಎಂದರು ಓಡೋಡಿ ಬಂದೆ

ಉರಿಬಿಸಿಲ ತಾಳದೆ ನಾನೊಮ್ಮೆ ನಿನ್ನ ನೋಡಿದೆ.....


ಹೇಳಿದರು ಕೇಳದೆ ನೀ ಬಿಡಲಿಲ್ಲ ನನ್ನನು ಆ ಉರಿಬಿಸಿಲಲಿ

ರೂಪವಿಲ್ಲದ ನಿನ್ನ ರೂಪವನ್ನು ಹೇಗೆ ಗುರುತು ಹಿಡಿಯಲಿ

ರೂಪವಿಲ್ಲದ ನಿನ್ನ ನಾನು ನನ್ನ ನೆರಳೆಂದು ಹೇಗೆ ನಂಬಲಿ

ನಿನ್ನ ರೂಪವನ್ನು ತಿಳಿಯಲು ನಾನ್ಯಾವ ಕಾರ್ಯ ಮಾಡಲಿ......


ನೀ ಬಂದರೆ ಬೆಳಕಲ್ಲಿ ಕಪ್ಪಾಗಿ...

ನಂಬುವೆನುನ ಎನ್ನ ನೆರಳೆಂದು

ನೀ ಬಂದರೆ ಕತ್ತಲಲ್ಲಿ ಬಿಳುಪಾಗಿ..

ನಾ ಹೇಗೆ ನಂಬಲಿ ನೀ ಎನ್ನ ನೆರಳೆಂದು...

- Halesh S

20 Oct 2016, 06:17 pm
Download App from Playstore: