ಹೃದಯ ಗೀತೆ

ಎದೆಯ ತಾಣದಿ ಮಿಡಿದ ನಾದವು
ಹೃದಯ ಗೀತೆಯ ಹಾಡಿದೆ!!

ಉದಯ ರಾಗದ ರವಿಯ ಬೆಳಕಲಿ
ಒಲವು ಮೈ ಮನ ಮರೆತಿದೆ!!

ನೂರು ಕನಸನು ಹಾಡುತ
ನೂರು ನೆನಪದು ಮೂಡಿದೆ!!

ಒಲಿಯ ಬೇಕಿದೆ ಒಲವ ಹೂ ನಗೆ
ಕಂಡು ನನ್ನ ನಲಿಯುತ!!

ರಾಗದಲ್ಲಿ ತಾಳ‌ ಮೇಳ
ಶೃತಿಯ ನಾದವ ಹರಿಸುತ!!

ಬಂದು ನನ್ನ ಸೇರುತ
ಹೃದಯ ಗೀತೆಯ ಹಾಡುತ!!

- ಪಿ.ಜಿ.ಜ್ಯೋತಿ

21 Oct 2016, 01:38 pm
Download App from Playstore: