ಜಗದಲ್ಲಿ ನೆಲೆಸಲಿ ಶಾಂತಿ

ಈ ಜಗದಲ್ಲಿ ನೆಲೆಸಲಿ ಶಾಂತಿ
ಬಾ ಕರುಣೆಯನು ತೋರಿಸು ದೇವಾ!!
ಭೂವಿ ನಡುಗೋ ಹೊತ್ತು
ಜಗ ಮುಳುಗೋ ಹೊತ್ತು !!

ಇಲ್ಲಿ ಹಸಿ ಹಸಿರು ಬೆಳೆಗಳ ನಾಶ
ಹಿಡಿದಿಹುದು ನಮ್ಮನ್ನು ಪಾಶ!!
ಇಲ್ಲಿ ವಿಧ ವಿಧದಿ ಬೆಳೆದಂತ ಕ್ರಾಂತಿ
ನಮ್ಮ ಬದುಕಲ್ಲಿ ದಿನವೂ ಅಶಾಂತಿ!!

ಕಡು ಬಡವರಿಗೆ ಇಲ್ಲ ನೆಲೆಯು
ಸಿರಿವಂತರಿಗೇನಲ್ಲ ಬೆಲೆಯು!!
ಬೀಡು ಬಿಟ್ಟಿರುವ ಜಾತಿ ವಿಜಾತಿ
ದ್ವೇಷ ಬೆಳೆಸಿಹುದು ನೀತಿಯ ಅಳಿಸಿ!!

ಭೇದ ಭಾವಕ್ಕೆ ಯಾಕಿಲ್ಲ ಕೊನೆಯು
ಪ್ರೀತಿ ಮಮತೆಗಾಗಿರಬೇಕು ಮನೆಯು!!
ಹೊತ್ತ ಭೂ ತಾಯಿಗೆ ತಕ್ಕ ಮಗನಾಗಿ ಬಾ
ಸಲಹೋ ಈ ನಾಡಿಗೆ ತಕ್ಕ ಪ್ರಜೆಯಾಗಿ ಬಾ!!

- ಪಿ.ಜಿ.ಜ್ಯೋತಿ

22 Oct 2016, 09:02 am
Download App from Playstore: