ಮೊದಲ ಪ್ರೀತಿ

ಕಪ್ಪೆಚಿಪ್ಪಿನೊಳಗೆ ಇತ್ತು
ಒಂದು ಸ್ವಾತಿ ಮುತ್ತು
ಕಡಲಿನಾಳದಲ್ಲಿ ತಾನು
ಅಡಗಿ ಕುಳಿತಿತ್ತು !!

ನನ್ನ ಹೃದಯದಲ್ಲಿ ಇತ್ತು
ಮೊದಲ ಪ್ರೀತಿ ಮತ್ತು
ಎದೆಯ ಗೂಡಿನಲ್ಲಿ ಅದು
ಅಡಗಿ ಕುಳಿತಿತ್ತು !!

ಹಕ್ಕಿಯೊಂದು ರೆಕ್ಕೆ ಬಿಚ್ಚಿ
ಹಾರಿ ಬಂದಂತ್ತಿತ್ತು
ಎದುರು ಬಂದ ಹಕ್ಕಿ
ಎದೆಯ ಕದವ ಬಡಿಯುತ್ತಿತ್ತು!!

ಕತ್ತಲಿಹುದು ಸುತ್ತ ಮುತ್ತ
ಹೋಗಲೀಗ ನಾನು ಎತ್ತ
ಮಳೆಯು ಬಹುದು
ಈಗಲೆ ಇತ್ತ !!

ಪುಟ್ಟದೊಂದು ಜಾಗವಿತ್ತು
ಕೃಪೆಯ ತೋರಿ ನನ್ನ ಸುತ್ತ
ಕೊಡುವೆ ನಾನು ಒಂದು ಮುತ್ತ
ಎಂದು ಹೇಳುತ!!

ಎದೆಯ ಕದವು ತೆರೆದುಕೊಳ್ಳಲು
ಹೃದಯದಲ್ಲಿ ಹುದುಗಿ ಕುಳಿತು
ಪ್ರೀತಿಯನ್ನು ಮೆಲ್ಲ ಹೊತ್ತು
ಹಾರಿ ಹೋಯ್ತು ತಿಳಿಯದು ಎತ್ತ!!

- ಪಿ.ಜಿ.ಜ್ಯೋತಿ

27 Oct 2016, 10:37 am
Download App from Playstore: