ಹಸಿವು
ಇನ್ನೇನು ರಣಹದ್ದುಗಳು ಬರಬಹುದು
ಕೊಳೆತ ಕಳೇಬರ ಅದಾಗಲೇ ಜೀರ್ಣವಾಗುತ್ತಿದೆ…
ನಾನೂ ಕಾಯುತ್ತ ಕೂತಿದ್ದೇನೆ
ಕಲ್ಲೊಂದ ಹಿಡಿದು,
ಹದ್ದೊಂದ ಹೊಡೆದು ಕೆಡವ ಬೇಕಿದೆ…
ನನಗೂ ಹಸಿವಿದೆ ಹದ್ದಿಗೂ ಹಸಿವಿದೆ,
ಈ ಹಸಿವು ತಾನೇ ಹೊಡೆದಾಡುವಂತೆ ಮಾಡಿದ್ದು…
ನಾ ಸತ್ತ ಮೇಲೆ ಬಡಪಾಯಿ ಹದ್ದುಗಳಿಗೆ ಆಹಾರವಾಗ ಬಯಸುತ್ತೇನೆ,
ಹಸಿವೆಂಬುದೇನೆಂದು ನನಗೂ ತಿಳಿದಿದೆ…
ಹಸಿವೆಂದರೆ ಅನ್ನಕ್ಕಾಗಿ ಬೇಡುವುದಲ್ಲ,
ಅದು ಕಿತ್ತು ತಿನ್ನಲು ಕಲಿಸುವಂತದ್ದು…
ನಿರಶನ, ಶಾಸ್ತ್ರ ಸಂಪ್ರದಾಯಗಳನ್ನು
ಹಸಿವು ಎಡಗಾಲಲ್ಲಿ ಒದ್ದು
ಎಂತ ಸಂಸ್ಕಾರಿಗೂ ಕ್ರೌರ್ಯ ಕೆರಳಿಸುವಂತದ್ದು…
- ಒಂಟಿತೋಳ
02 Nov 2016, 04:42 pm
Download App from Playstore: