ವ್ಯಸನ

ಇನ್ನೇನು ನಾನು ಅವಸಾನದ ಅಂಚಿಗೆ ಬಂದಿದ್ದೇನೆ,
ಬಿಡಲಾಗದ ವ್ಯಸನಗಳ ಕಾರಣ…|

ಮದ್ಯವಲ್ಲ - ಹೊಗೆಸೊಪ್ಪಲ್ಲ ,
ಅದು ಮಾಂಸ ಮಜ್ಜೆಗಳನು
ನುಜ್ಜುಗುಜ್ಜಾಗಿಸುವಂತ ರಾಸಾಯನಿಕವೂ ಅಲ್ಲ…
ಅದೊಂದು ಹೇಳತೀರದ ವ್ಯಥನ,
ಸಂಬಂಧ ಸಂಕೋಲೆಗಳ ಸಂಕಥನದ
ವಿಚಾರ ಸಂಕೀರ್ಣ… |

ಗಂಜಿಗೆ ಬಿದ್ದ ನೊಣದ ಒದ್ದಾಟವೇ
ನನ್ನ ಸಂಕಟ ಸ್ವರೂಪ,
ಮೂರ್ಖ ಕವಿ ಪಾಪದ ಕಾಗದದ ಮೇಲೆ
ನಡೆಸುವ ವಿಕೃತಿಯ ಮೂರ್ತ ರೂಪ
ನನ್ನ ವ್ಯಸನ… |

- ಒಂಟಿತೋಳ

03 Nov 2016, 11:21 am
Download App from Playstore: