ಶಿಲಾ ಬಾಲೆ

ನತ೯ನದ ಭಂಗಿಯಲಿ
ನಾನಾಥ೯ ನೀಡಿದರು
ನಲ್ಮೆಯ ನಟಿಯಂತೆ
ನೀ ನಾಟ್ಯ ಶೃಂಗಾರಿ

ವೈಭವಕ್ಕೊಂದು ಮೆರಗನ್ನೀಡಿ
ಇತಿಗೊಂದು ಸಾಕ್ಷಿ ಮಾಡಿ
ನಾಟ್ಯ ಮಣಿಯೊಡಗೂಡಿ
ಎಲ್ಲ ಯುಗಕ್ಕು ನೀ ಜನಮನದ ಗುಡಿ

ಕಲ್ಲಿನೊಳು ಕಲೆಕಂಡು
ಕೆಲವು ಶಿಲಾ ಮೂತಿ೯ಗಳಾಗಿ
ನೆಲೆ ನಿಂತ ಶಿಲಾ ಬಾಲೆ
ನೀನೊಂದು ಅದ್ಬುತವೇ
ನೀನೆಂದು ಅಜರಾಮರವೇ

ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}

- ನಾಗರಾಜ ಬಾಕೆ೯ರ್

03 Nov 2016, 05:41 pm
Download App from Playstore: