ಇದು ನಿಜಾನಾ!!!

ಆಸೆಗೆ ಮಿತಿಯಿಲ್ಲ
ಅಹಿಂಸೆ ಉಳಿಯುತ್ತಿಲ್ಲ
ಅಸಂಖ್ಯಾತ ಜನರಲ್ಲಿ
ಅಹಿತಕರ ಜೀವನ ನಂದಾಯಿತಲ್ಲ

ಅಂದು ಕೊಂಡದ್ದು ಸಿಗುತ್ತಿಲ್ಲ
ಅರಮನೆ ಕನಸಾಯಿತಲ್ಲ
ಅವರಿವರ ನಡುವೆಯೆಲ್ಲ
ಅಂಜುವವ ನಾನಾದೆನಲ್ಲ

ಆಸೆಯಲಿ ಅರವತ್ತಾಯಿತಲ್ಲ
ಅವಧಿ ಮುಗಿಯುತ ಬಂದಿತಲ್ಲ
ಅಂಬರದ ಅಂಚಿನಲಿ
ಅಳಿದುಳಿದ ಕಣ ನಾನಾದೆನಲ್ಲ
ಇದು ಅದೇನಾ ಇದು ನಿಜಾನಾ...!!!!!

ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ{9743216235}

- ನಾಗರಾಜ ಬಾಕೆ೯ರ್

04 Nov 2016, 08:40 am
Download App from Playstore: