ಪರವಶ

ನಾ ಮೊದಲೇ ಬರೆದಿಡಬೇಕಿತ್ತು ಬಿಡು !!

ನೀ ಸೋಕಿ ಹಣ್ಣಾದ ಹೃದಯದ,
ಬಣ್ಣವ ಬರೆದಿಡಬೇಕಿತ್ತು !!

ಸಂಜೆ ಮೊಬ್ಬಾಗುವವರೆಗೂ,
ಹುಬ್ಬೇರಿಸಿ ಹುಡುಕಿದ, ಕ್ಷಣಗಳ
ಕವಿತೆಯಲಿ ಬರೆದಿಡಬೇಕಿತ್ತು !!

ದೂರದ ಆ ತಿರುವಿನಲ್ಲಿ ,
ನೀ ಮರೆಯಾದಾಗ ಆನಂದಕ್ಕಿಟ್ಟ
ಅಲ್ಪವಿರಾಮವ ಬರೆದಿಡಬೇಕಿತ್ತು !!

ಯಾಕೆಂದರೆ, ನಿನ್ನ ಕಣ್ಣು ನೋಡುತ,
ವಿವರಿಸಲಾಗದ ವಿಪರ್ಯಾಸ !!

- Narendra

04 Nov 2016, 09:44 am
Download App from Playstore: