ಮದರಂಗಿ

ಚೆಲುವೆಯರ ಚದರಂಗಿ
ಚಾಚುವ ಕೈಗೆ ಮದರಂಗಿ

ಕೆಂಪು ರೇಖೆಯಲಿ
ಕಗ್ಗತ್ತಲೆಯನು ಬೆಳಗಿಸುವಲಿ
ಕೋಪಾರುಣ ನೇತ್ರದಲಿ
ಕೋಮಲವಾಗಿಸುವ ಮದರಂಗಿ

ಕೈಗೆಟುಕುವ ಕಾಸಿನಲಿ
ಕಂಪಿನ ಶೃಂಗಾರದಲಿ
ಕಂಕಣ ಭಾಗ್ಯದಲಿ
ಕನಸಿನ ಮನೆಗೊಯುವ ಮದರಂಗಿ

ಕಣ್ಣು ಕಣ್ಣಿಗೆ ಸೊಬಗಿನಲಿ
ಕೈಲಾಸದ ಕುವರೆಯರಲ್ಲಿ
ಕಣ್ಮನ ಸೆಳೆಯುವಲಿ
ಕಲ್ಪತರುವಿನಂತಿರೊ ಮದರಂಗಿ
ಇದು ಹೆಣ್ಣು ಜನುಮದ ಒಂದಂಗಿ

ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}

- ನಾಗರಾಜ ಬಾಕೆ೯ರ್

04 Nov 2016, 10:28 am
Download App from Playstore: