ಪ್ರೇಮ್ ಕಹಾನಿ
ಎ ಮಳೆ ಹನಿಯೇ
ನೀ ಭೂಮಿಗೆ ಬಿದ್ದ ಆಕ್ಷಣವೇ
ನನ್ನ ಎದೆಯಲಿ ತುಂಬಿತು
ಪ್ರೀತಿಯ ಪನ್ನಿರಾ...
ಹನಿಗಳ ಹವಳಗಳು
ನನ್ನ ಮೊಗದ ಮೆಲೊಂದು
ರಂಗೊಲಿಯ ಬಿಡಿಸುತಲಿ
ಮನದಲ್ಲಿ ಪ್ರೀತಿಯ ಪಾರಿವಾಳಕ್ಕೆ
ಜೀವವ ನೀಡಿದವು...
ಆ ಪ್ರೀತಿಯ ಜೀವಕ್ಕೆ
ಜೀವನವ ಮುಡಿಪಾಗಿರಲೆಂದು
ನಾನ್ ಹೊರಟೆ ಅದರ ನೆನಪಲ್ಲೆ
ನಿನ್ನಯ ನೆನಪಿನಲಿ
ನಾ ಮರೆತೆ ನನ್ನನ್ನೆ....
'ನೀನೆ ನನ್ನ ಜೀವಾ' ಎನ್ನುತಲಿ
ನಾ ಬಂದೆ ನಿನ್ನಾ ಹಿಂಬದಿಯಲಿ..
ನನ್ನ ಆತರಹದ ಬರುವಿಕೆಯಾ
ನೀನ್ ಕಂಡು ಕಾಣದಂತೆ
ಹೊಗುತಿರುವದ ಕಂಡ ನನ್ನ ಕಣ್ಣುಗಳು
ಹರಿಸಿತು ಕಂಬನಿಯಾ..........
-p.m
- pm
04 Nov 2016, 11:08 am
Download App from Playstore: