ಮಸಣದ ದಾರಿ
ಹುಟ್ಟಿ ಬಂದಿರೊ ಈ
ಅಪರೂಪದ ಜನ್ಮದೊಳಗ
ನಾನು ನನ್ನದು ಎಂದು
ಪರದಾಡುವೆ ಏಕೋ !
ಜನಿಸಿರೊ ನಿನಗೆ
ಸಾವು ಬರೋ ಕ್ಷಣ ತಿಳಿಯದು
ಸತ್ತ ಮೇಲೆ ನಿನ್ನ ಬಂಧುಗಳು
ಅತ್ತು ಕರೆಯುವರು ಒಂದೇ ದಿನ
ಜಗದ ನಿಯಮದೊಳು
ನಡೆಯುವ ಕಥೆ ಇಷ್ಟೇ
ಜೊತೆಗೆ ಹುಟ್ಟಿದ ಸಲುವಾಗಿ
ಹೊತ್ತೊಯುವರು ನಿನ್ನ ಮಸಣಕ್ಕೆ
ತಿಳಿಯದೆ ನಿನಗೆ ಮಂಕೆ
ಇದ್ದು ಸತ್ತಿರುವವರು ಮುಕ್ಕಾಲು ಜನ
ಸತ್ತು ಬದುಕಿರುವವರು ಬರಿ ಕಾಲು ಜನ
ನಿನ್ನ ಸ್ವಂತ ಮನೆಯೆ ಈ ಮಸಣ
ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}
- ನಾಗರಾಜ ಬಾಕೆ೯ರ್
04 Nov 2016, 06:32 pm
Download App from Playstore: