ಯಾರು ನಾವೆಲ್ಲಾ?
ಕವಿಯಾದೆ ನಾನು ಕಂಡಿದ್ದು ಬರೆಯಲಾಗಲಿಲ್ಲ:
ಭಾರತೀಯನಾದೆ ನಾನು ಕಣ್ಣಿದ್ದು ಕುರುಡನಾದೆನಲ್ಲ!
ರೈತನಾದೆ ನಾನು ಸಾಲವಿಲ್ಲದೆ ಬದುಕಲಾಗಲಿಲ್ಲ,
ಸ್ನೇಹ ಜೀವಿಯಾಗುವ ಬದಲು, ಅವಕಾಶವಾದಿಗಳಾದೆವಲ್ಲ.
ಮಾದ್ಯಮಿಕ ಶಾಲೆಯ ಮದ್ಯಮ ವರ್ಗದ ಜನರಾಗಿ ಬದುಕಲಾಗಲಿಲ್ಲ,
ಮಾನವರಾಗಿ ಮಾನವೀಯತೆಯ ನೆಲೆಯಲ್ಲಿ
ಬದುಕಲಾಗಲಿಲ್ಲ!
ಕಾಲಚಕ್ರದ ದಾಸರಾಗಿ ಜೀವಿಸುವುದು ಮರೆತೆವಲ್ಲ.
ಬುದ್ದಿಜೀವಿಗಳಾಗಿ ಬದುಕಿನ ಅರ್ಥ ತಿಳಿದು ಕೊಳ್ಳಲಾಗಲಿಲ್ಲ.
ಯಾರು ನಾವೆಲ್ಲಾ ? ಯಾರು ನಾವೆಲ್ಲಾ?
- ವೇಣು ಆರ್ ಚಿನ್ನದೂರು
04 Nov 2016, 08:53 pm
Download App from Playstore: