ಹೆಣ್ಣು ಮತ್ತು ಗೊಂಬೆ

ನಾನು ಈ ಪ್ರಪಂಚದಲ್ಲಿ ಹೆಣ್ಣಾಗಿ
ಹುಟ್ಟುದಕ್ಕಿಂತ ನಿನ್ನ ತರ ಒಂದು
ಗೊಂಬೆಯಾಗಿ ಜನ್ಮ ತಾಳಿದ್ದರೆ
ನಿನಗಿಂತ ಎಷ್ಟೋ ಖುಷಿ ಆಗಿರುತ್ತಿದ್ದೆ...

ಒಡಹುಟ್ಟಿದ ಸಹೋದರಿ ಎಂದು
ನೆನೆಸದೆ ನರ ರಾಕ್ಷಸರ ತರ ತಮ್ಮ
ಕಾಮ ಕ್ರೋಧವನ್ನು ತೋರ್ಪಡಿಸಿ
ಇಲ್ಲಿ ಜೀವಂತವಾಗಿಯೆ ಭಕ್ಷಿಸುವರು...

ತಮ್ಮ ಕಾಮದಾಹದ ತೀಟೆ ತೀರಿಸಲು
ಪ್ರೀತಿ ಎಂಬ ನಾಟಕವಾಡುವರು
ಅಮೂಲ್ಯವಾದ ಜೀವದ ಬೆಲೆ
ಅರಿಯದೆ ಜೀವಂತವಾಗಿ ಹೂಳುವರು...

ವರದಕ್ಷಿಣೆ ಎಂಬ ಮಹಾಮಾರಿಯು
ಇದಕ್ಕಿಂತ ಭಿನ್ನವಾಗಿಯೇನು ಇಲ್ಲ
ಅಲ್ಲಿ ಒಂದೇ ಕ್ಷಣ ಸಾಯಿಸುವರು
ಇಲ್ಲಿ ಅಣು ಅಣುವಾಗಿ ಸಾಯಿಸುವರು...

ಹೆಣ್ಣುಹೆತ್ತವರು ಎಂಬ ಒಂದೇ ಕಾರಣಕ್ಕೆ
ಪತ್ರ ಹಿಡಿದು ಬೀದಿ-ಬೀದಿ ಅಲೆಯುವರು...
ಲಕ್ಷ ಲಕ್ಷ ಸೇರಿಸುವ ಚಿಂತೆಯಲೇ
ಭಗವಂತನ ಪಾದ ಸೇರುವರು ನನ್ನ ಹೆತ್ತವರು...

ಹೆಣ್ಣು ನೋಡಲು ಬರುವರು ಹತ್ತಾರು
ವಾಹನಗಳಲ್ಲಿ ಸಾಲು ಸಾಲಾಗಿ
ಕಪ್ಪು ಬಣ್ಣದ ಹುಡುಗಿಯೆಂದು ಗುನುಗಿ
ತಿಂದುಂಡು ಹೋಗುವರು ಮೌನವಾಗಿ...

ನಿಜವಾಗಲೂ ನಾನು ಕಪ್ಪೇ??
ಅಥವಾ ಅವರ ನೋಟವೇ??
ಅಷ್ಟಕ್ಕೂ ನಾನು ಕಪ್ಪಗಿದ್ದದ್ದು
ನಿಜವಾಗಲೂ ನನ್ನದೇ ತಪ್ಪೇ??

ತಪ್ಪು-ಒಪ್ಪುಗಳ ತುಲನೆಯಲ್ಲಿ
ನಾನಂತೂ ಒಂಟಿಯೀಗ...
ಕಪ್ಪು-ತಪ್ಪುಗಳನು ಮೇಲಿರುವ
ಅವನೊಬ್ಬನೇ ತಿದ್ದಬೇಕೀಗ...

*~~~~~~~~~~~~~~~~~~~~~~~~~~~~~~~*

- ಸಲ್ಮಾನ್ ಸಜೀಪ

05 Nov 2016, 01:10 pm
Download App from Playstore: