ಭಾವ ಲಹರಿ
ಮನದ ಭಾವಲೋಕದೊಳಿಳಿದು
ಮನದ ಮನೀಷೆಯನು
ಮರ್ಮದಿಂದಲೆ ಮಣಿಸಿ
ಮನವನು ಮಯಣದಂತೆ
ಕರಗಿಸುವ ಶಕ್ತಿ ನೀನು..
ಮನದ ಕಡಲೊಳಗಿಳಿದು
ಎಲ್ಲ ಭಾವವ ಸ್ಪುರಿಸಿ
ಮನದಿಂಗಿತವನರಿಯೊ ಮನಸ್ವಿ ನೀನು
ನಿನ್ನ ಓಜಸ್ಸಿನ ಪಥದ
ಪಯಣ ಚಲಿಸಿದೆ ಗಾವುದ..
ನಿನ್ನ ಮಾರ್ಮಿಕ ಹಸ್ತ
ಮನದ ಮನೋಗತವನೇ
ಉದ್ವೃಿತ್ತಗೊಳಿಸುತಿದೆ
ಮನದ ಶರಧಿಯನು
ಮಥನಗೊಳಿಸಿಹೆ ನೀನು
ಇನ್ನು ಬರಬಹುದೇನು ಮನ್ವಂತರ..
ಮಬ್ಬು ಕವಿದಿಹಮನಕೆ
ಮಯೂಖದ ಹೊಸ ಸ್ಪರ್ಶ
ಹೊಸಜೀವಕಳೆಯ ನಿಮಿತ್ತವನರಿವ
ಸ್ವಾಧ್ಯಾಯದೊಳು ಚಿತ್ತ
ಈ ತಥ್ಯ ಮಿತ್ಯದೊಳಗೆ
ಮನವು ಮರ್ದನವಾಗದಿರಲಿ ಮತ್ತೆ..
ಮನದ ಔದ್ಧತ್ಯಕೆ
ಉಪೋದ್ಧಾತವ ಬರೆದವನೆ ನೀನು
ಮನದ ಮಾಧುರ್ಯವಾ
ಮಾರ್ಗಣದಿ ವಧಿಸದೆಯೆ
ಹೃದಯ ಮಿಡಿತಕೆ
ಹೊಸ ಭಾವ ಬೆರೆಸು..
©CRB
- ಭಾವ ಮೃದಂಗ
05 Nov 2016, 02:33 pm
Download App from Playstore: