ಬಾಳ ಹಾದಿಯಲಿ..

ಬಾಳಿನಾ ಯಾನದಲಿ ಬಣ್ಣವದು ನೂರು..
ಕೈ ಚಾಚಿ ಹಿಡಿದರೆ ಸಿಗುತಿಲ್ಲ ಚೂರು..
ಮನಸಿನಾ ಗೊಂದಲವ ಕೇಳುವವರಾರು..
ಗೊಂದಲಕೆ ಉತ್ತರವ‌ ನೀಡುವವರಾರು..

ಭರವಸೆಯ ಮಾತುಗಳಿಗಿಲ್ಲ ಕೊನೆಯಿಲ್ಲಿ..
ಭರವಸೆಯು ಉಳಿಯುವುದೆ ಬರಿಯ ಮಾತುಗಳಲ್ಲಿ..
ಸಂತಸದಿ ನಲಿವಾಗ ಎಲ್ಲ ಬಂಧುಗಳಿಲ್ಲಿ..
ನೋವಿನಾ ದಿನ ಬರಲಿ ಬಂಧ ಕಳಚುವುದಲ್ಲಿ..

ಮುತ್ತಿದಾ ಕಾರ್ಮೋಡ ಮಳೆಯ ಸುರಿಸಲೆಬೇಕು..
ನೋವಿನಾ ಹಾದಿಯನು ನಗುತ ಜಯಿಸಲೆಬೇಕು..
ಗೆದ್ದಾಗ ಬರುವರು ಹೇಳಿ ಸಂಬಂಧ..
ಮತ್ತೆ ಕೂಡುವುದೇನು ಕಡಿದಿರುವ ಬಂಧ..??
©CRB

- ಭಾವ ಮೃದಂಗ

05 Nov 2016, 02:35 pm
Download App from Playstore: