ಪ್ರೀತಿನೆ ಹಿಂಗಾ !!!!
ನಿನ್ನ ನೋಡಿದ
ಮೊದಲ ನೋಟದಿ
ಹೃದಯದೊಳಗೊಂದು
ಸಡಗರ ಸಂಭ್ರಮಿಸುತ್ತಿದೆ
ಒಂದು ನಿಮಿಷದ
ಮೊದಲ ನೇರ ನೋಟದಿ
ಸ್ವಗ೯ದ ಸಾಮ್ರಾಜ್ಯ ಗೆದ್ದಂತಾಗಿದೆ
ನಿನ್ನಲಿ ನಾ ಬಿದ್ದಂತಾಗಿದೆ
ಮುಗಿಲ ಅಂಚಿನಲ್ಲಿರುವ
ಬೆಳ್ಳಿ ಚುಕ್ಕೆಯಂತೆ ನಿನ್ನ ನಗು.
ಕಣ್ಣ ಸನ್ನೆಯಲಿ ಮಿನುಗುತ್ತಿದೆ
ಪ್ರೀತಿ ಪರದೆಯ ಇಣುಕು ನೋಟ
ಮುಚ್ಚಿಟ್ಟುಕೊಳ್ಳದೇ ಹೇಳಿಬಿಡು
ಅಚ್ಚು ಮೆಚ್ಚಿನ ಹುಡುಗ ನಾನೆಂದು
ಸಚ್ಚ ಪ್ರೀತಿಯ ನೀಡುವೆಯೆಂದು
ನಿನ್ನೊಡನೆ ಕೊನೆಯವರೆಗೂ ಇರುವೆನೆಂದು
ಹೇಳಿ ಬಿಡು ಬಾಲೆ! ಇದು ನನ್ನ ಕರೆಯೋಲೆ!!!
ಇಂತಿ ನಿಮ್ಮ♡ಸ್ನೇಹ ಸಿಂಚನ♡
ನಾಗರಾಜ್ ಬಿ {9743216235}
- ನಾಗರಾಜ ಬಾಕೆ೯ರ್
05 Nov 2016, 08:33 pm
Download App from Playstore: