ಬಂಧಮುಕ್ತಳು..

ಮನಸಿನಾ ಪುಸ್ತಕದಿ
ಮರೆಯಾದ ಪುಟ ನೀನು
ಮತ್ತೆ ತೆರೆಯಲು ಬಹುದೆ
ಮುಗಿಸಿರುವ ಅಧ್ಯಾಯ..

ಮನದಿ ಕಟ್ಟಿಹ ಗುಡಿಯ
ಕೆಡವಿ ಹೋಗಿಹೆ ನೀನು
ಮತ್ತೆ ಪೂಜೆಯು ಏಕೆ
ಕಲಶವಿರದಾ ಗುಡಿಗೆ..

ಮನವು ಕೂಡಿದ‌ ಕನಸ
ಅರಿತು ಅಳಿಸಿಹೆ ನೀನು
ನೆನಪಿಸುವ‌ ಮನಸೇಕೆ
ಮತ್ತೆ ಕೂಡದ‌ ಕನಸ..

ಮನದಿ ನೀಡಿದ ನೆಲೆಯ
ತೊರೆದು ಸಾಗಿಹೆ ನೀನು
ಬಲಿಯಾದ ಮನಕೀಗ
ಭಾವನೆಯ ಹಂಗೇನು..?

ಬೆಸೆದಿರುವ‌ ಬಂಧವನೆ
ಭೇದಿಸಿರುವೆಯ ನೀನು
ನಿನ್ನ ಒಲವಿನ ಸೆರೆಯ
ಬಂಧಮುಕ್ತಳು ನಾನು..
©CRB

- ಭಾವ ಮೃದಂಗ

05 Nov 2016, 11:16 pm
Download App from Playstore: