ಭಾವ‌ ಬಿಂಬ

ಚಿತ್ರಕ್ಕೊಂದು ಭಾವ..

ಮನದ ಭಾವದ ಬಿಂಬ
ಬಿಂಬಿತವು ವದನದಾ ಮೇಲೆ..
ಭಾವಕುಂಚವು ಇಂದು
ತೋರುತಿದೆ ರೌದ್ರತೆಯ ಲೀಲೆ..

ನಗುಸೂಸೊ ನಯನದಲಿ
ಬಿರುಸು ಬಾಣದ ಕದನ..
ಮನದ ವಿಕೃತಿಯಿಂದ
ಮೊಗದಿ ರೌದ್ರತೆ ಜನನ..

ತಿಳಿಯಾದ ಮನದಲ್ಲಿ
ಭಾವ ಕಲಕಿದೆ ಇಂದು..
ಅದರ ರೂಪವ ನೋಡು
ಮುಖಭಾವದೊಳಗಿಂದು..

ಅಳುವಿಹುದು ನಗುವಿಗುದು
ನೋವಿನಾ ಕುರುವಿಹುದು..
ಆಸೆ-ನಿರಾಸೆಯ ಜೊತೆಗೆ
ಪ್ರೀತಿಯಾ ಕಲೆ ಇಹುದು..

ಕಂಡ ಕನಸನು ಕೊಂದು
ಕಂಬನಿಯ ಮಿಡಿದಿಯುದು..
ಮನದ ನೋವಿನ ಸೇಡ
ತೀರಿಸಲು ಹೆಣಗಿಹುದು..

ಪ್ರೀತಿ ಕಳೆದಿದೆ ಎಂದೋ
ಮನವು ಮರೆತಿದೆ ಎಂದೋ..
ಮತ್ತ ಕಲಕುವುದೇಕೆ
ಚಿತ್ತ ಕೋರದ ಬಯಕೆ..
©CRB

- ಭಾವ ಮೃದಂಗ

07 Nov 2016, 09:42 am
Download App from Playstore: