ಅಣ್ಣ

ನೀ ಹಿಂಗ್ಯಾಕೊ
ಜರಿತಿಯ ನನ್ನ
ತವರಾಗ ಅವನೆ
ನನ್ನ ಅಣ್ಣ!!

ನನ್ನ ನೆತ್ತಿ ಮುಟ್ಟಿ ಅವ
ಭಾಶೆಯ ಕೊಟ್ಟವ್ನೆ
ತಂಗಿ ನೀನವ್ವ
ಎಂದೂ ನನ್ನ ಕಣ್ಣ!!

ದೂರದ ಊರಾಗ
ಕಾಯುತ್ತ ಕುಂತವ್ನೆ
ಬೇಗ ಬಾರವ್ವ
ತಂಗಿ ಎಂದ ಅಣ್ಣ!!

ತಂಗೀಯ ಧಾರೆಗಾಗಿ
ತುಂಗೆಯ ನೀರ ತಂದ
ಮಂಗಳ ಕಾಲದಾಗ
ಚೆಂದಾಗಿ ಧಾರೆ ಎರೆದ!!

ಪೆಟ್ಟಿಗೆ ಹೊನ್ನ ಕೊಟ್ಟ
ತೊಟ್ಟಿಲ ಕಟ್ಟಿ ಕೊಟ್ಟ
ಹಿತ್ತಲ ಗಿಡಕೆಲ್ಲ
ನನ್ನಯ ಹೆಸರಿಟ್ಟ!!

ತವರಾಗ ಅವನೆ
ನನ್ನ ಅಣ್ಣ
ತೋಳ ಬಲದಾಗ
ಅವ ಭೀಮಣ್ಣ!!

- ಪಿ.ಜಿ.ಜ್ಯೋತಿ

08 Nov 2016, 06:33 pm
Download App from Playstore: