ದೀಪ ಜ್ವಾಲೆ..

ಮನದ‌ ಗುಡಿಯಲಿ ದೀಪ
ಬೆಳಗುತಿದೆ ನಿನ ಪ್ರೀತಿ,
ಮಯಣದಾ ದೀಪವದು
ಉರಿಯುವುದೆ ಯುಗಪೂರ್ತಿ..

ಆಸೆಯಾ ಭಾಷೆಯಾ
ಆಮಿಷದ ಮಡುವಲಿ,
ಆಪ್ಯಾಯನದ ಸಮೂಹಿತ
ನೆರಳಿನಾ ಸುಳಿಯಲಿ..

ನಿಜವಾದ‌ ಪ್ರೀತಿಯಾ
ಇರುವಿಕೆಯ ನಾ ಮರೆತೆ,
ಕರುಗುವಾ ದೀಪದಾ
ಎದುರಲ್ಲೆ ನಾ ಕುಳಿತೆ..

ದೀಪದಾ ಜ್ಯೋತಿಯು
ಕಿಚ್ಚನು ಹಚ್ಚಿದೆ,
ಮನಸಿನಾ ಮುಖವನು
ಸುಡುತ ತಾ ಕರಗಿದೆ..

ಬಾಳ ಬೆಳಗಿದ ಪ್ರೀತಿ
ಚಿತೆಯಲಿ ಮಲಗಿದೆ,
ಬದುಕ ಬೆಳಗುವ ದೀಪ
ಚಿತೆಯನು ಉರಿಸಿದೆ..
©CRB

- ಭಾವ ಮೃದಂಗ

09 Nov 2016, 09:51 am
Download App from Playstore: