ವನದ ಗಿಳಿಗಳು
ಆಡುತ ನಲಿಯುತಲಿದ್ದವು ಚಂದನ ವನದಲಿ
ತಮ್ಮ ನಿತ್ಯ ಬದುಕಿನ ನೋವು ನಲಿವಿನ ಜಂಜಾಟದಲಿ
ಅಚ್ಚ ಹಸಿರ ಕಾನನದ ಸ್ವಚ್ಚ ಶ್ರೀ ಗಂಧದ ವನದಲಿ
ಹೀಗೆ ಹಾಯಾಗಿ ದಿನಗಳ ಕಳೆಯುತ ಚಂದದ ಬದುಕು ತಮ್ಮದಾಗಿಸುತ
ಒಂದಿನ ಕಂಡವು ಆಸೆಬುರುಕ ಬೇಟೆಗಾರನ ಕಣ್ಣಿಗೆ
ಉಕ್ಕಿತು ಆಸೆ ಹಿಡಿಯಲೆ ಬೇಕೆಂದು ಆ ಗಿಳಿಗಳಿಗೆ
ಇದರ ಪರಿವೆ ಇಲ್ಲದ ಗಿಳಿಗಳು ಸಿಕ್ಕವು ಕಷ್ಟದ ದಿನಗಳಿಗೆ
ತಮ್ಮ ಹಿಂದನ ದಿನಗಳನ್ನು ನೆನೆದು ಪ್ರಾರ್ಥಿಸಿದವು ಭಗವಂತನ ಪಾದಗಳಿಗೆ
ಇದೇ ಇವುಗಳ ಕೊನೆಯ ಗಳಿಗೆ
- ರನ್ನ ಮಹಾದೇವ
15 Nov 2016, 08:52 am
Download App from Playstore: