ಕನ್ನಡ ಕವಿ ಕವನ
ಕನ್ನಡ ಕವಿಗಳ ಮನ
ಹರುಷದಿ ನುಯಡಿದಿಹ ಗಾನ
ಬರೆದಿಹ ಕವನ ನವೀನ
ಬಣ್ಣಿಸುತಿಹರು ಈ ಜನ!!
ಕಲಿತಿರೊ ಅಕ್ಷರ ಮಾಲೆ
ಕೂಡಿದರೆ ಪದ ಮಾಲೆ
ಬರೆದರೆ ಮನದ ಭಾವನ
ದೊರೆಯುವುದು ನವ ಕವನ!!
ಕನ್ನಡ ಪದಗಳ ಸಾಲು
ಬರೆಯುವ ಬಗೆ ನೀ ಕೇಳು
ಬರೆದರೆ ಮನಸಿನ ಮನನ
ಆಗುವುದು ಕನ್ನಡ ಕವಿ ಕವನ!!
- ಪಿ.ಜಿ.ಜ್ಯೋತಿ
30 Nov 2016, 02:38 pm
Download App from Playstore: