♡ನಿನಗಾಗೆ ನಾನು♡
ನಿನಗಾಗೆ ನಾನು, ಇಷ್ಟು ವರ್ಷ
ಯಾರನ್ನು ಮೆಚ್ಚದೆ ಕಾದಿದ್ದು
ನನಗಾಗೆ ನಿನ್ನನ್ನು ಆ ಬ್ರಹ್ಮನು ಭೂಮಿಗೆ ತಂದದ್ದು
ನಮ್ಮಿಬ್ಬರ ಜೋಡಿಯ ನೋಡಿಯೇ
ಈ ಭೂಮಿ ಮೇಲೆ ಪ್ರೀತಿಗೆ ಅರ್ಥವು ಬಂದದ್ದು
ನಿನಗಾಗೆ ನಾನು, ಇಷ್ಟು ವರ್ಷ ಕಾದಿದ್ದು.
ನಿನಗಾಗೆ ನಾನು, ಇಷ್ಟು ವರ್ಷ
ಯಾರನ್ನು ಮೆಚ್ಚದೆ ಕಾದಿದ್ದು
ನಿನ್ನ ಇಂಪಾದ ದನಿಯ ಕೇಳಿದ ಮೇಲೆ
ಕೋಗಿಲೆ ಹಾಡಲು ಕಲಿತದ್ದು
ನಿನ್ನ ಕಾಲ ಗೆಜ್ಜೆಯ ನಾದವ ಕೇಳಿದ ಮೇಲೆ
ಈ ಭೂಮಿ ಮೇಲೆ ಸಂಗೀತದ
ಸಪ್ತಸ್ವರಗಳು ಜನಿಸಿದ್ದು,
ನಿನ್ನ ನಡಿಗೆಯನ್ನು ನೋಡಿಯೇ
ಶಾಂತಲೆಯು ನಾಟ್ಯವ ಕಲಿತದ್ದು
ನಿನ್ನ ನೋಡಿದ ಮೇಲೆ ಈ ಜಗಕ್ಕೇ
ಸೃಷ್ಟಿ ಅದ್ಭುತವೆನಿಸಿದ್ದು
ನಿನಗಾಗೆ ನಾನು, ಇಷ್ಟು ವರ್ಷ ಕಾದಿದ್ದು.
ನಿನಗಾಗೆ ನಾನು, ಇಷ್ಟು ವರ್ಷ
ಯಾರನ್ನು ಮೆಚ್ಚದೆ ಕಾದಿದ್ದು
ನಿನ್ನ ನೋಡಿದ ಮೇಲೆ ಈ ಜಗಕ್ಕೇ
ಸೌಂದರ್ಯ ಎಂದರೆ ಏನೆಂಬುದು ತಿಳಿದದ್ದು,
ಕವಿಪುಂಗವರು ಕವನಗಳ ರಚಿಸಲು
ಕಲಿತದ್ದು, ಶಿಲ್ಪ ಕಲಾಕೃತಿಗಳು ಕೆತ್ತಲುಪಟ್ಟಿದ್ದು,
ಇದೆನೆಲ್ಲಾ ಕಂಡ ಇಂದ್ರನು ನಿನ್ನನ್ನು ತನಗೆ ನೀಡಬೇಕೆಂದು ಬ್ರಹ್ಮನನ್ನು ಕಾಡಿಸಿ ಬೇಡಿದ್ದು,
ನಿನ್ನ ಬದಲಾಗಿ ರಂಬೆ, ಊವ೯ಷಿ, ಮೇನಕೆ
ಚಿಲೋತ್ತಮೆಯರನ್ನು ಆ ಬ್ರಹ್ಮನು ಇಂದ್ರನಿಗಾಗಿ ಸೃಷ್ಟಿಸಿದ್ದು, ನಿನ್ನನ್ನು ನನಗೆ ವರವಾಗಿ ನೀಡಿದ್ದು
ಆ ವರಕ್ಕಾಗಿಯೇ ನಾನು ಇಷ್ಟು ಜನ್ಮ ಪಡೆದಿದ್ದು.
ನಿನಗಾಗೆ ನಾನು, ಇಷ್ಟು ಜನುಮ
ಯಾರನ್ನು ಮೆಚ್ಚದೆ ಕಾದಿದ್ದು
ನಿನ್ನ ನಗುವಿನ ಮೋಡಿಗೆ ಮುದುಡಿದ
ತಾವರೆಯೇ ಅರಳಿದ್ದು, ನಿನ್ನ ಧ್ವನಿಯ ಕೇಳಿ
ಒಂದು ಕ್ಷಣ ನನ್ನನ್ನೇ ನಾ ಮರೆತದ್ದು
ನಿನ್ನ Sparshaದಿಂದಲೇ ತರುಲತೆಗಳು
ಫಲಬರಿತವಾಗಿ ತೊನೆದದ್ದು,
ನದಿಗಳು ಮೈದುಂಬಿ ಹರಿದದ್ದು
ನಿನಗಾಗೆ ನಾನು, ಸಾವಿರ ಜನುಮವೇ ಬರಲಿ
ಆ ದೇವರನ್ನು ಬೇಡುವುದೊಂದೆ ನನ್ನವಳಾಗಿರು ನೀನು ಎನ್ನುವುದೊಂದೆ.
ನಿನಗಾಗೆ ನಾನು, ನನಗಾಗಿಯೇ ನೀನು.
- ಕೃಷ್ಣ
30 Nov 2016, 05:58 pm
Download App from Playstore: