ಚೆಲುವೆ

ಮುತ್ತಿನಂಥಹ ಒಡವೆ
ಮುತ್ತುಹಳ್ಳಿಯ ಚೆಲುವೆ
ಬಾಳ ಸುಗ್ಗಿಯಲಿ
ಹಿಗ್ಗಿ ಮಿಂಚುತಾಳೆ
ಮುತ್ತುಹಳ್ಳಿಯ ಚೆಲುವೆ.

ಮುಗಿಲಂಥ ಬದುಕಿಗೆ
ತುಂಬು ಚಂದಿರನಂತೆ

ನಲುಮೆ ನಂಬುಗೆಯ
ಬೆಳಕ ಬೀರುತಾಳೆ
ಮುತ್ತುಹಳ್ಳಿಯ ಚೆಲುವೆ.

ಹೆಸರು ಸಿರಿಗೌರಿ
ನವಿಲಂತೆ ಗರಿಗೆದರಿ
ನನ್ನೆದೆಯ ಬನದಲ್ಲಿ
ಕುಣಿಯುತಾಳೆ.

ಹತ್ತು ಕಟ್ಟುವ ಕಡೆ
ಮುತ್ತು ಕಟ್ಟುವ ಬಾರಾ
ಎನುತ ನನಗೊಂದು
ಕವನವೇ ಆಗುತಾಳೆ
ಮುತ್ತುಹಳ್ಳಿಯ ಚೆಲುವೆ.

- harsha

02 Dec 2016, 07:04 am
Download App from Playstore: