ಮೊದಲ ಕವಿತೆ
ಕವಿತೆ.. ಇದು ನನ್ನ ಮೊದಲ ಕವಿತೆ
ಬರೆಯಬೇಕೆಂದು ಮೂಲೆಲಿ ಕುಳಿತೆ..
ಅವರಿವರ ನೋಡಿ ಸ್ವಲ್ಪ ಸ್ವಲ್ಪ ಕಲಿತೆ..
ಈ ಕವನವನ್ನ ಅವಳಿಗೆ ಹೇಳುವುದು ಒಳಿತೆ?
ಹೆಂಗೊ ತಲುಪಿಸಿದೆ ಯಾರಿಗೂ ಕಾಣದಂತೆ!
ಅವಳ ಉತ್ತರಕ್ಕೆ ಕಾದು ಕುಂತೆ!
ಅಯ್ಯೊ! ಪತ್ರದಲ್ಲಿ ಹೆಸರು ಬರೆಯೋದೆ ಮರೆತೆ!
ಮೊದಲ ಸಂದೇಶ ರವಾನೆಯಲ್ಲೆ ಸೋತೆ!
ಸಮಯ ಕೊಟ್ಟು ಓದಿದವರಿಗೆ ನನ್ನ ಕೃತಜ್ಞತೆ!
#ಪವನ್ಅರಸ್
- ಪವನ್ ಅರಸ್
08 Dec 2016, 12:10 pm
Download App from Playstore: